Wednesday 9 December 2015

ಜಪಾನ್ ಮತ್ತು ಭಾರತೀಯ ಸಂಸ್ಕೃತಿಗಿರುವ ಸಾಮ್ಯತೆಗಳು



ಜಪಾನ್ ಮತ್ತು ಭಾರತ ದೇಶಗಳ ಸ್ನೇಹ ಸಂಬಂಧ ಇಂದು ನಿನ್ನೆಯದಲ್ಲ. ಶತಶತಮಾನಗಳಿಂದ ಭಾರತ ಮತ್ತು ಜಪಾನ್ ಒಳ್ಳೆಯ ಸ್ನೇಹವನ್ನು ಕಾಪಾಡಿಕೊಂಡು ಬಂದಿವೆ.
ಹಾಗೆಯೇ ನಮ್ಮ ಮತ್ತು ಜಪಾನ್  ಸಂಸ್ಕೃತಿಗೆ ಬಹಳ ಸಾಮ್ಯತೆಗಳಿವೆ. ಸಾಮ್ಯತೆಗಳನ್ನು ಸಂಕ್ಷಿಪ್ತವಾಗಿ ನೋಡೋಣ.
* ಜಪಾನ್ ಭಾಷೆ ನಮ್ಮ ಭಾರತದ ಭಾಷೆಯಲ್ಲಿ ಇರುವಂತೆಯೇ ಅಕ್ಷರಗಳನ್ನು ಮತ್ತು ಉಚ್ಚಾರಣೆಯನ್ನು ಹೊಂದಿದೆ.  ನಮ್ಮ ಭಾಷೆಗಳ ವ್ಯಾಕರಣ ಮತ್ತು ಜಪಾನ್ ಭಾಷೆಯ ವ್ಯಾಕರಣ ಒಂದೇ ಆಗಿದೆ.
* ಜಪಾನ್ ಜನರು ಹಿರಿಯರಿಗೆ ತೊಂಬತ್ತು ಡಿಗ್ರಿ ಗೆ ಬಗ್ಗಿ ನಮಸ್ಕರಿಸಿದರೆ ನಾವುಗಳು ಹಿರಿಯರ ಕಾಲು ಮುಟ್ಟಿ ನಮಸ್ಕರಿಸುತ್ತೇವೆ
* ನಮ್ಮಲ್ಲಿರುವಂತೆಯೇ ಜಪಾನಿನಲ್ಲಿ ಶಿಂತೋ ಮತ್ತು ಬೌದ್ದ ಧರ್ಮಗಳಿವೆ. ಜಪಾನ್ ಜನರು ನಮ್ಮಂತೆಯೇ ಹುಟ್ಟು ಸಾವಿಗೆ ದೇವರೇ ಕಾರಣ ಎಂದು ನಂಬಿಕೆ ಉಳ್ಳವರು.
* ದೈವವನ್ನು ನಂಬುವ ಹಾಗೆ ದೆವ್ವವನ್ನು ನಂಬುತ್ತಾರೆ. ದೆವ್ವವನ್ನು ಹೋಡಿಸಿ ಒಳ್ಳೆಯತನವನ್ನು ಬರಮಾಡಿಕೊಳ್ಳಲು ಬೀನ್ಸ್ ಕಾಳನ್ನು ಎಸೆದು ಹಬ್ಬದ ರೀತಿ ಆಚರಿಸುತ್ತಾರೆ
* ನಮ್ಮ ಹೆಣ್ಣುಮಕ್ಕಳು ಸೀರೆ ಹುಡುವ ರೀತಿ ಜಪಾನ್ ಹೆಣ್ಣು ಮಕ್ಕಳು ಕಿಮೋನೋ ಎನ್ನುವ ಸಾಂಪ್ರದಾಯಿಕ ಉಡುಗೆಯನ್ನು ತೊಡುತ್ತಾರೆ , ಕಿಮೋನೋ ವು ನಮ್ಮ ಸೀರೆಯ ತರಹವೇ ಇರುತ್ತದೆ.ನಮ್ಮಲ್ಲಿ ಇದ್ದಂತೆಯೇ ಜಪಾನಿನಲ್ಲಿ ಕೂಡ ಅವಿಭಕ್ತ ಕುಟುಂಬಗಳು ಇದ್ದವು. ನಮ್ಮಲ್ಲಿಯಂತೆಯೇ ಮನೆಯ ಹಿರಿಕರೇ ಮನೆಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು ಆದರೆ ಈಗ ನಮ್ಮಲ್ಲಿ ಇರುವಂತೆಯೇ ವಿಭಕ್ತ ಕುಟುಂಬಗಳು ಜಾಸ್ತಿಯಾಗಿವೆ. ನಮ್ಮ ಸಮಾಜದಲ್ಲಿ ಇರುವಂತೆಯೇ ಜಪಾನಿನಲ್ಲಿಯೂ ಸಹ ಪುರುಷ ಪ್ರಧಾನ ಸಮಾಜವಿತ್ತು. ಹೆಣ್ಣು ಮಕ್ಕಳನ್ನು ಮನೆಯಿಂದ ಆಚೆ ಕಳಿಸುತ್ತಿರಲಿಲ್ಲ ಆದರೆ ಎರಡನೇ ಮಹಾಯುದ್ದದ ನಂತರ ಪರಿಸ್ಥಿತಿ ಬದಲಾಗಿದೆ
* ನಮ್ಮ ಹೊಸ ವರ್ಷಾಚರಣೆಯಂತೆ ಜಪಾನಿಯರು ಸಹ ಹೊಸ ವರ್ಷದಂದು ದೇವಸ್ತಾನಗಳಿಗೆ ಭೇಟಿ ನೀಡುತ್ತಾರೆ.
ನಮ್ಮಲ್ಲಿ ಹೆಣ್ಣುಮಕ್ಕಳು ಋತುಮತಿಯಾದಾಗ ಆಚರಿಸುವ ಆಚರಣೆಯಂತೆಯೇ, ಜಪಾನಿನಲ್ಲೂ ಹೆಣ್ಣು ಮಕ್ಕಳು ಇಪ್ಪತ್ತು ವರ್ಷಕ್ಕೆ ಬಂದಾಗ ಸೆಯಿಜಿನ್ ನೋ ಹಿ ಎಂದು ಆಚರಿಸುತ್ತಾರೆ.
* ನಮ್ಮ  ದಸರಾ ಹಬ್ಬದಲ್ಲಿ ನಾವು ಬೊಂಬೆಗಳನ್ನು ಕೂರಿಸುವಂತೆ  ಜಪಾನೀಯರು ಸಹ ಬೊಂಬೆ ಕೂರಿಸಿ ಹಿನ ಮತ್ಸುರಿ ಎಂದು ಆಚರಿಸುತ್ತಾರೆ. ಜಪಾನಿನಲ್ಲಿ ಮತ್ಸುರಿ ಎಂದರೆ ಹಬ್ಬ ಎಂದರ್ಥ.
* ನಮ್ಮ ದೀಪಾವಳಿ ಹಬ್ಬದಂತೆ ಜಪಾನಿನಲ್ಲಿ ಹಾನಬಿ ಎಂಬ ಹಬ್ಬವಿದೆ, ಹಬ್ಬದಂದು ನಮ್ಮಂತೆಯೇ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ.
* ಪ್ರತಿ ವರ್ಷ ಏಪ್ರಿಲ್ ರಂದು ಬುದ್ದನ ಜನ್ಮ ದಿನಾಚರಣೆಯನ್ನು ಆಚರಿಸುತ್ತಾರೆ. ಎಲ್ಲಾ ಹಬ್ಬದ ಸಮಯದಲ್ಲೂ ಮಕ್ಕಳಿಂದ ಮುದುಕರವರೆಗೂ ನೃತ್ಯಮಾಡಿ ಸಂಭ್ರಮಿಸುತ್ತಾರೆ.
* ಜಪಾನಿನಲ್ಲು ಕೂಡ ನಮ್ಮಲ್ಲಿರುವಂತೆ ಪೋಷಕರು ತಮ್ಮ ಮಕ್ಕಳಿಗೆ ಸಂಗಾತಿಯನ್ನು ಹುಡುಕಿ ಮಾಡುವೆ ಮಾಡುತ್ತಿದ್ದರು ಎರಡನೇ ಮಹಾ ಯುದ್ದದ ನಂತರ ಪ್ರೀತಿಸಿ ಮದುವೆಯಾಗುವುದು ರೂಡಿಯಲ್ಲಿದೆ. ಮದುವೆಯನ್ನು ಸಂಪ್ರದಾಯದಂತೆ ದೇವಸ್ಥಾನಗಳಲ್ಲಿ ಮಾಡುತ್ತಾರೆ.
 * ಭಾರತೀಯ ಹೆಣ್ಣು ಮಕ್ಕಳಂತೆಯೇ ಜಪಾನಿನ ಹೆಣ್ಣು ಮಕ್ಕಳು ಕುಟುಂಬ ಮತ್ತು ಮಕ್ಕಳಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಡುತ್ತಾರೆ.
* ಜಪಾನಿನ ಜ್ಯೂಡೋ ಮತ್ತೆ ನಮ್ಮ ಕರಾಟೆ ಕಲೆಗಳು ಒಂದೇ ತರನಾಗಿವೆ.
* ನಾವು ದೇವಸ್ಥಾನದ ಒಳ ಹೋಗುವ ಮುನ್ನ ಕಾಲು ತೊಳೆಯುವಂತೆ ಜಪಾನೀಯರು ಸಹ ಕಾಲು ತೊಳೆಯುತ್ತಾರೆ. ಕಾಲು ತೊಳೆಯಲೆಂದೇ ವಿಶೇಷ ವ್ಯವಸ್ತೆ ಇರುತ್ತದೆ ದೇವಸ್ಥಾನಗಳಲ್ಲಿ ನಮ್ಮಂತೆಯೇ ದೀಪ ಹಚ್ಚಿ ಊದುಬತ್ತಿಯನ್ನು ಬೆಳಗಿಸುತ್ತಾರೆ . ದೇವಸ್ಥಾನದ ಮುಂಭಾಗ ದೊಡ್ಡ ಗಂಟೆಯನ್ನು ಕಟ್ಟಿ ಅದನ್ನು ಬಡಿಯಲೆಂದೇ ದೊಡ್ಡ ಹಗ್ಗವನ್ನು ಕಟ್ಟಿರುತ್ತಾರೆ ಜನರು ಹಗ್ಗದ ಸಹಾಯದಿಂದ ಗಂಟೆಯನ್ನು ಬಡಿದು ಎರೆಡು ಭಾರಿ ಕೈ ತಟ್ಟಿ ದೇವರಿಗೆ ನಮಸ್ಕರಿಸುತ್ತಾರೆ. ದೇವಸ್ಥಾನದ ಪೂಜಾರಿಗಳು ನಮ್ಮ ಇಲ್ಲಿಯ ಪೂಜಾರಿಗಳಂತೆ ಜುಟ್ಟು ಬಿಟ್ಟಿರುತ್ತಾರೆ.
* ನಮ್ಮಂತೆಯೇ ಪ್ರಕೃತಿಯಾದ ಭಾನು, ಭೂಮಿ, ಜಲ, ಅಗ್ನಿ ಮತ್ತು ಕಾಡನ್ನು ದೇವರೆಂದು ನಂಬುತ್ತಾರೆ.  ವಾರದ ದಿನಗಳ ಹೆಸರುಗಳು ಸಹ ನಮ್ಮಂತೆಯೇ ಇವೆ ಸೋಮವಾರವನ್ನು ಚಂದ್ರನ ಅರ್ಥದಿಂದ, ಮಂಗಳವಾರವನ್ನು ಅಗ್ನಿಯ ಅರ್ಥದಿಂದ, ಬುಧವಾರವನ್ನು ನೀರಿನ ಅರ್ಥದಿಂದ, ಗುರುವಾರವನ್ನು ಮರದ ಅರ್ಥದಿಂದ, ಶುಕ್ರವಾರವನ್ನು ಚಿನ್ನ ಮತ್ತು ದುಡ್ಡಿನ ಅರ್ಥದಿಂದ, ಶನಿವಾರವನ್ನು ಭೂಮಿಯ ಅರ್ಥದಿಂದ, ಭಾನುವಾರವನ್ನು ಸೂರ್ಯನ ಅರ್ಥದಿಂದ ಕರೆಯುತ್ತಾರೆ.
ನಮ್ಮಗಳಂತೆ ಮನೆಯಲ್ಲಿ ಎಲ್ಲರೊಂದಿಗೆ ನೆಲದ ಮೇಲೆ ಕೂತು ಊಟ ಮಾಡುತ್ತಾರೆ ಊಟಕ್ಕೆ ಮುಂಚೆ ದೇವರಲ್ಲಿ  ಪ್ರಾರ್ಥಿಸಿ ರೈತರಿಗೆ ಕೃತಘ್ನತೆ ಅರ್ಪಿಸಿ , ಊಟವಾದ ನಂತರ ಅಡುಗೆ ಮಾಡಿದವರಿಗೆ ಧನ್ಯವಾದ ಅರ್ಪಿಸುತ್ತಾರೆ. ನಮ್ಮಂತೆಯೇ ಅಥಿತಿದೇವೋಭವ ಎನ್ನುವಂತೆ ಅಥಿತಿಗಳನ್ನೂ ದೇವರಂತೆ ನೋಡಿಕೊಳ್ಳುತ್ತಾರೆ .
* ಮನೆಯಿಂದ ಹೊರ ಹೋಗುವಾಗ ಹೋಗಿ ಬರುವೆ ಎಂದು, ಹೊರಗಿನಿಂದ ಬಂದಾಗ ವಾಪಸ್ ಬಂದೆ ಎಂದು ಹೇಳುವುದು ಅವರ ಸಾಮಾನ್ಯ ರೂಢಿಗಳಲ್ಲೊಂದು.
* ಸಾಕು ಪ್ರಾಣಿಗಳೆಂದರೆ ಜಪಾನೀಯರಿಗೆ ಎಲ್ಲಿಲ್ಲದ ಪ್ರೀತಿ, ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ.
* ನಮ್ಮ ಸಮಾಜದಲ್ಲಿ ಜನಗಳು ಮಾಡುವ ಕೆಲಸಕ್ಕನುಗುಣವಾಗಿ ಜಾತಿ ಪಂಗಡಗಳನ್ನು ವಿಂಗಡಿಸಿದಂತೆಯೇ ಜಪಾನಿನಲ್ಲು ಕೂಡ ಕೆಲಸಕ್ಕನುಗುಣವಾಗಿ ಜಾತಿಯನ್ನು ವಿಂಗಡಿಸಲಾಗಿದೆ

                                                                     ಇಂತಿ,
                                                                     ಕವಿತಾ ಗೋಪಿಕುಂಟೆ