Wednesday, 27 February 2013

ಭಾಷಾ ರಾಜಕೀಯವೆಂಬ ಬಿಸಿಯ ಬೇಗೆಯಲ್ಲಿ

ನಮ್ಮ ರಾಜ್ಯದ ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಎಂದರೆ ಎಲ್ಲರ ಕಿವಿ ಚುರುಕಾಗುತ್ತವೆಚುನಾವಣೆ ಹತ್ತಿರವಾಗುವ ಸಾದ್ಯತೆಗಳಿವೆ.ಯಾರ ಯಾರ ಸಾಧನೆ ಎಷ್ಟು ಎಂದು ಜನರು ತಮ್ಮ ಎರಡೂ ಕಣ್ಣುಗಳಿಂದ ನೋಡಿ ಪಾವನರಾಗಿದ್ದಾರೆಮುಂದೆ ಜನರ ಒಲವು ಯಾರಿಗೆ ಎಂಬ ಕುತೂಹಲ ಇದ್ದೇ ಇದೆ ಎಲ್ಲಾ ಸಂಗತಿಗಳ ನಡುವೆ ಮುಖ್ಯವಾಗಿ ಎದ್ದು ಕಾಣುವುದು ಜಾತಿ ರಾಜಕೀಯಇವತ್ತಿನ ನಮ್ಮ ರಾಜ್ಯದ ರಾಜಕೀಯ ಅಸ್ಥಿತ್ವದಲ್ಲಿರುವುದು ಜಾತಿ ಆಧಾರದ ಮೇಲೆ.
ರಾಜ್ಯ ರಾಜಕಾರಣದಲ್ಲಿ ಜಾತಿ ರಾಜಕಾರಣ ಹೇಗೆ ತಾಂಡವಾಡುತ್ತಿದೆಯೋ ಅದೇ ರೀತಿ ಉದ್ಯೋಗ ಪಥದಲ್ಲಿ ಭಾಷಾ ರಾಜಕೀಯ ತಾಂಡವಾಡುತ್ತಿದೆ.ಇವತ್ತಿನ ದಿನ ಒಬ್ಬ ಪದವೀಧರನಿಗೆ ಲಭಿಸುವ ಉದ್ಯೋಗ ಅವನ   ಸಾಮರ್ಥ್ಯದ ಮೇಲಾಗಲಿಅವನ ಜಾಣ್ಮೆಅಥವಾ ಅವನ ಚಾಕಾಚಕ್ಯತೆ ಮೇಲೆ ನಿರ್ಧಾರವಾಗುತ್ತಿಲ್ಲ ಭಾಷೆಯ ಮೇಲೆ ನಿರ್ಧಾರವಾಗುತ್ತಿದೆಇದಕ್ಕೆ ಮುಖ್ಯ ಕಾರಣ ಆಯಾ ಭಾಷಾ ಜನರ ಒಗ್ಗಟ್ಟುಇಲ್ಲಿ ಒಬ್ಬ ಇಬ್ಬರ ಶ್ರಮ  ಎದ್ದು  ಕಾಣುವುದಿಲ್ಲ ಭಾಷಾ ಜನಾಂಗದ ಶ್ರಮ ಮತ್ತು ಒಗ್ಗಟ್ಟು ಎದ್ದು ಕಾಣುತ್ತದೆ.
ನಾವಿಂದು ಎಲ್ಲಾ ಭಾಷಾ ಜನಾಂಗದ ನಡುವೆ ತಾರತಮ್ಯದ ಬೇಗೆಯಲ್ಲಿ ಬೇಯುತ್ತಿದ್ದೇವೆಎಲ್ಲರ ಹಾವಳಿಯಿಂದಾಗಿ ನಾವಿಂದು ಮೂಲೆಗುಂಪಾಗಿದ್ದೇವೆಸಾಕಷ್ಟು ತುಳಿತಕ್ಕೆ ಒಳಗಾಗಿದ್ದೇವೆ ಭಾಷಾ ರಾಜಕೀಯ ಅಂತರಸಾಕ್ಷಿಯನ್ನು ಮರೆತುಮಾನವೀಯ ಮೌಲ್ಯಗಳನ್ನು ತೊರೆದು ಒಂದು ಪಿಡುಗಿನ ರೀತಿ ಹರಡಿದೆ ಪಿಡುಗಿಗೆ ಎಷ್ಟೋ ಜನ ಪ್ರತಿಭಾವಂತರು ತುತ್ತಾಗಿದ್ದಾರೆಅರ್ಹತೆ ಇದ್ದರೂ ಕೆಲಸ ಇಲ್ಲದೆ ಬೀದಿ ಬೀದಿ ಅಲೆಯುತ್ತಿದ್ದಾರೆಅಪ್ಪ ಅಮ್ಮ ಸಾಲ ಮಾಡಿಬಿತ್ತುವ ಹೊಲವನ್ನು ಮಾರಿಕೊನೆಗೆ ತಾಯಿಯ ಮೈಮೇಲಿನ ಒಡವೆಗಳನ್ನು ಮಾರಿ ಮಕ್ಕಳನ್ನು ಓದಿಸಿರುತ್ತಾರೆ ಕೊನೆಗೆ ಕೆಲಸ ಸಿಗದೆಮಳೆ ಬಾರದಿರುವಾಗಬರಗಾಲದಲ್ಲಿ ಕೆಂಗೆಟ್ಟು ಮಳೆಗಾಗಿ ಆಕಾಶ ನೋಡುವ ರೀತಿ ಅಪ್ಪ ಅಮ್ಮ ಮಕ್ಕಳನ್ನು ನೋಡುತ್ತಿರುತ್ತಾರೆಮಕ್ಕಳಾದ ನಾವುಗಳು ಏನೂ ಮಾಡಲಾಗದೆನೋವು ತಡೆಯಲಾಗದೆಯಾರಿಗೂ ಹೇಳಲಾಗದೆ ನಮ್ಮೊಳಗೆ ನಾವೇ ಸಾಯಬೇಕಾಗುತ್ತದೆ.
ಇವತ್ತಿನ ದಿನ ರೈತ ಮಳೆ ಬೆಳೆ ಇಲ್ಲದೆ ಸಾಲ ತೀರಿಸಲಾಗದೆ ಹೇಗೆ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾನೋ ಅದೇ ರೀತಿ ಮುಂದಿನ ದಿನಗಳಲ್ಲಿ ಪಧವೀದರರು ಓದುವುದಕ್ಕಾಗಿ ಮಾಡಿರುವ ಸಾಲವನ್ನು ತೀರಿಸಲಾಗದೆ ಸಾವಿನ ದಾರಿ ಹಿಡಿಯುವುದನ್ನು ಕಣ್ಣಮುಂದೆ ನೋಡಬೇಕಾಗುತ್ತದೆ.
ಎಲ್ಲವನ್ನು ಕಣ್ಣ ಮುಂದೆ ನೋಡುತ್ತಿದ್ದರೂ ಅಸಹಾಯಕರಾಗಿ ನಿಂತಿದ್ದೇವೆ ನಾವಿಂದು ಕೆಟ್ಟ      ಪರಿಸ್ಥಿತಿಯಲ್ಲಿ ಬೂದಿ ಮಾತ್ರ ಬಲ್ಲದು ಬಿಸಿಯ ಬೇಗೆಯನು ಅನ್ನುವ ಹಾಗೆ ಎಲ್ಲಾ ಗೊತ್ತಿದ್ದರೂ ಇಷ್ಟು ಅನುಭವಿಸುತ್ತಿದ್ದರೂ ಯಾಕಿಷ್ಟು ಸಹನೆ ..?
ಇವತ್ತು ಸಹನೆಯಿಂದ ಸಹಿಸಿಕೊಂಡು ಕೈ ಚೆಲ್ಲಿ ಕೂತರೆನಾಳೆ ನಮ್ಮ ಮುಂದಿನ ಪೀಳಿಗೆ ಕೆಲಸಕ್ಕಾಗಿ ಅರ್ಹತೆ ಇದ್ದರೂ ಭಿಕ್ಷೆ ಬೇಡುವ ರೀತಿಯಲ್ಲಿ ಕೈ ಚಾಚಿ ನಿಲ್ಲಬೇಕಾಗುತ್ತದೆಅವರು ಹಾಕಿದ ಎಂಜಲನ್ನು ಮೃಷ್ಟಾನ್ನ ಅಂದುಕೊಂಡು ತಿನ್ನಬೇಕಾಗುತ್ತದೆ.
ಸಹನಾಮಯಿಗಳಾಗಿರಿಎಲ್ಲರನ್ನೂ ಪ್ರೀತಿಯಿಂದ ಅಕ್ಕರೆಯಿಂದ ಕಾಣಿರಿ ಆದರೆ ನಮ್ಮನ್ನು ನಾವು ಹಾಳುಮಾಡಿಕೊಂಡು ಸಹನೆ ಪ್ರೀತಿ ತೋರಿಸುವುದು ಬೇಡಇವತ್ತು ಇಷ್ಟೆಲ್ಲಾ ನಮ್ಮ ಮೇಲೆ ನಮ್ಮ ನೆಲ ಜಲದ ಮೇಲೆ ಹಾವಳಿಯಾಗುತ್ತಿರುವುದಕ್ಕೆ ಕಾರಣ ನಮ್ಮಲ್ಲಿ ಒಗ್ಗಟ್ಟು ಇಲ್ಲದಿರುವುದುನಾವು ಭಲ ಪ್ರದರ್ಶನದಲ್ಲಿ   ವಿಫಲರಾಗಿರುವುದು.
ಒಗ್ಗಟ್ಟಿನಲ್ಲಿ ಭಲವಿದೆಏಳಿ ಎದ್ದೇಳಿ ಗುರಿ ತಲುಪುವ ತನಕ ನಿಲ್ಲದಿರಿ ಅನ್ನುವ ಹಾಗೆ ನಾವು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸೋಣಇದಕ್ಕೆಲ್ಲಾ ನಾವು ಮಾಡಬೇಕಿರುವುದು ಇಷ್ಟೇನಮ್ಮಲ್ಲಿರುವ ಪ್ರತಿಯೊಬ್ಬರೂ ನಮ್ಮವರಿಗಾಗಿ ನಮ್ಮವರ ಏಳಿಗೆಗಾಗಿ ಕೈಲಾದಷ್ಟು ಸಹಾಯ ಮಾಡುವುದುನಾವು ನಮ್ಮದು ಅನ್ನುವ ಕಿಚ್ಚನ್ನು ಸದಾ ಎದೆಯಲ್ಲಿ ಇಟ್ಟುಕೊಳ್ಳುವುದು 

                                  ||ಜೈ ಹಿಂದ್ ಜೈ ಕರ್ನಾಟಕ ಮಾತೆ.||

                                            ಇಂತಿ,
                                                   ಕವಿತಾ ಗೌಡ

No comments:

Post a Comment